ಪ್ರೀತಿ ಬೋಸ್ (ಜನನ ೨೦ ಏಪ್ರಿಲ್ ೧೯೯೨, ಹರಿಯಾಣದ ಸೋನಿಪತ್‌) ಒಬ್ಬ ಭಾರತೀಯ ಕ್ರಿಕೆಟ್‌ಗಾರ್ತಿ. ಅವರು ಹರಿಯಾಣ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ದೇಶೀಯ ಪಂದ್ಯಗಳಲ್ಲಿ ಆಡುತ್ತಾರೆ. ಇವರು ಭಾರತ ಮಹಿಳಾ ತಂಡ, ಭಾರತೀಯ ರೈಲ್ವೇ ತಂಡ ಮತ್ತು ಟಿ೨೦ ಮಹಿಳಾ ಏಷ್ಯಾ ಕಪ್ ಫೈನಲ್‌ನಲ್ಲಿ ಆಡಿದ ಹರಿಯಾಣದ ಮೊದಲ ಮಹಿಳಾ ಆಟಗಾರ್ತಿ. ಅವರು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲೂ‌ಪಿ‌ಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. == ಅಂತರರಾಷ್ಟ್ರೀಯ ವೃತ್ತಿಜೀವನ == === ಏಕದಿನ ಅಂತಾರಾಷ್ಟ್ರೀಯ === ೧೯ ಫೆಬ್ರವರಿ ೨೦೧೬ ರಂದು, ಬೋಸ್ ಶ್ರೀಲಂಕಾ ಮಹಿಳೆಯರ ವಿರುದ್ಧ ಭಾರತ ಮಹಿಳೆಯರಿಗಾಗಿ ತನ್ನ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು ಮತ್ತು ಪಂದ್ಯದಲ್ಲಿ ಎರಡು ವಿಕೆಟ್ ಪಡೆದರು. ಪ್ರೀತಿ ಬೋಸ್ ಅವರ ಬೌಲಿಂಗ್‌ನಿಂದ ಭಾರತವು ೨೦೧೬ ರ ಮಹಿಳಾ ಏಷ್ಯಾ ಕಪ್ ಟಿ೨೦ ಪ್ರಶಸ್ತಿಯನ್ನು ಬ್ಯಾಂಕಾಕ್‌ನಲ್ಲಿ ಪಾಕಿಸ್ತಾನದ ವಿರುದ್ಧ ೧೭ ರನ್‌ಗಳಿಂದ ಗೆದ್ದುಕೊಂಡರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಕ್ರಿಕೆಟ್ ಆರ್ಕೈವ್‌ನಲ್ಲಿ ಪ್ರೀತಿ ಬೋಸ್